ಎಲ್ಲಿ ಮತ್ತೊಬ್ಬ ಟೋಪಿವಾಲಾ??

ಇಂತಿಷ್ಟು ಗಂಟೆಗೆ ಬಂದು Cheque collect ಮಾಡ್ಕೊಂಡು ಬಿಡಿ ಎಂದು ಹೇಳಿ Director  ಸಾಹೇಬರು ಕರೆ ಕಟ್ ಮಾಡಿದರು! ಸೀನ ಸುಬ್ಬ ಎಂಕ ಮತ್ತು ನಾನಿದ್ದ AC Chamber ಒಳಗೆ ನೀರವ ಮೌನ.  ಧೈರ್ಯ ಮಾಡಿ ಕೇಳ್ಬಿಟ್ಟೆ “ಏನ್ ಸಾರ್ ದೊಡ್ಡ ಹೀರೋಗೆ ಪೇಮೆಂಟ್ ಕೊಡ್ತಿರೋ ಹಾಗಿದೆ??”

ಅಯ್ಯೋ ಇಲಪ್ಪ! ಹೊಸ ಸಿನೆಮಾಗೆ Heroine Confirm ಮಾಡ್ಬೇಕಿತ್ತು, ಬಾಂಬೆ ಬ್ಯೂಟೀ ಬರ್ತಾ ಇದ್ದಾರೆ ಅವರಿಗೆ Cheque ತಲುಪಿಸೋ ವ್ಯವಸ್ತೆ ಮಾಡ್ತಿದ್ದೆ ಅಷ್ಟೇ!

ನೋಡಿ ಇವ್ರೇ….. ಜನಕ್ಕೆ Glamour ಬೇಕು! ಇಲ್ಲಿ Complications ಜಾಸ್ತಿ. ಸುಮ್ನೆ ತಲೆ ನೋವು , ಬಾಂಬೆಯವರಾದ್ರೆ ಬರ್ತಾರೆ Act ಮಾಡ್ಕೊಂಡ್ ಹೋಗ್ತಾರೆ.  ಪೇಮೆಂಟ್ ಜಾಸ್ತಿ ಕೇಳಿದ್ರು ಕಿರೀಕ್ ಇರಲ್ಲ, ನೀವು Writer ಅಲ್ವಾ ಇವೆಲ್ಲ ನಿಮಗೆ ಅರ್ಥ ಆಗೋಲ್ಲ. ಸರಿ ನೀವ್ ಹೊರಡಿ ಒಳ್ಳೆ ಕಥೆ ಇದ್ರೆ ಕೊಡಿ ಆಮೇಲೆ ಮಿಕ್ಕಿದ್ದು ನೋಡೋಣ!

ಮಕ್ಕಿ ಕಾ ಮಕ್ಕಿ ಸಿನಿಮಾ ಮಾಡೋದನ್ನೇ ಚಾಳಿ ಮಾಡ್ಕೊಂದವ್ನೆ ಇವರಿಗೆ ಕಥೆ ಕೊಟ್ರೆ ನಿಜವಾಗಲೂ ಸಿನಿಮಾ ಮಾಡ್ತಾರ ಅಂತ ಯೋಚಿಸ್ತಾ ಸೀನ ಸುಬ್ಬ ಎಂಕನ ಸಂಕೊಲೆ ಬಿಡಿಸಿಕೊಂಡು ಮನೆಯತ್ತ ಹೊರಟೆ.

As usual ಸಿಕ್ಕಾಪಟ್ಟೆ Traffic Jam. ಅಲ್ಲಿಯವರೆಗೆ ಪಕ್ಕದಲ್ಲಿ ನಿಂತಿದ್ದ ಹಳೆಯೊಂದು Indica ಕಾರ್ ಗಮನಿಸದೆ ಇದ್ದ ನಾನು ತಿರುಗಿ ನೋಡಿದರೆ ಚಿಕ್ಕ ಕಾರ್ನೊಳಗೇ ಕುಳಿತ್ತಿತೊಂದು ಆಜಾನಬಹು ವ್ಯಕ್ತಿತ್ವ! ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡು ದೊಡ್ಡದೇ.                    ಬಹಳ ವರ್ಷಗಳ ಹಿಂದೆಯೇ ಸುಂದರ ಕೃಷ್ಣ ಅರಸ್ ನಂತರದ ಸ್ಥಾನ ಇವರಿಗೆ ಸೇರಬೇಕು ಎಂದು ಕನ್ನಡ ಸಿನಿ ಪ್ರೇಕ್ಷಕರು ನಿರ್ಧರಿಸಿದ್ದಂತಿತ್ತು. ಆದರೆ ಅವಕಾಶ, ಅದೃಷ್ಟ ಮತ್ತು “ನಮ್ಮ”ತನವ ಬಯಸದ so called “Makers” ಗಳ ಕೃಪಾ ಕಟಾಕ್ಷದಿಂದ ಅವರ ಸಿನಿ ಕರಿಯರ್ ಆರಕೆರಲಿಲ್ಲ ಮೂರಕ್ಕೆ ಇಳಿಯಲಿಲ್ಲ. ಸಿಕ್ಕ ಕೆಲವೇ ಕೆಲವು ಉತ್ತಮ ಪಾತ್ರಗಳಿಂದ ಗುರುತಿಸಿಕೊಂಡು ಇಂದಿಗೂ ಅವರ ಸಿನಿ ಪಯಣ ಮುಂದುವರೆದಿದೆ.

ಸಣ್ಣದೊಂದು ಮುಗುಳ್ನಗೆ ಬೀರಿ ಅವರತ್ತ ಕೈ ಬೀಸಿ “ಸಾರ್ ಆರೋಗ್ಯಾನ ಚೆನ್ನಾಗಿದೀರಾ??” ಅಂತ ಕೇಳಿದೆ! Oh First Class ಅಂತ ಮತ್ತದೇ “ಕಂಚಿನ ಕಂಠ”ದಿಂದ ಬಂತು ಉತ್ತರ.

Once Again ಅವರ ಹೆಸರು ಬೇಡ. ಸಾಧ್ಯವಾದರೆ ಅವರ “ಪೋಲಿ ಕಿಟ್ಟಿ” “ಗೋಧೂಳಿ” ಕಿರುತೆರೆ ಧಾರಾವಾಹಿಗಳನ್ನೊಮ್ಮೆ ನೋಡಿ! “ಹುಲಿಯ”,”ಆ ದಿನಗಳು” ಚಿತ್ರಗಳಲ್ಲಿ ಅವರ ಪಾತ್ರ ನಿರ್ವಹಣೆ ನಿಜಕ್ಕೂ ಅಧ್ಬುತ.

“ಪುಟಾಣಿ ಪಾಪ…”, “ಯಲಾ ಕುನ್ನಿ..” “ಸಾಹುಕಾರ್ ಸಂಗಪ್ಪ ಶ್ರೀ ರಾಮಚಂದ್ರ ಇದ್ದಂಗೆ”…. ಇಂತಹ ಅನೇಕ One liners ಗಳಿಂದ ಕನ್ನಡ ಪ್ರೇಕ್ಷಕರನ್ನು ಹುಚ್ಚೆಬಿಸಿದ “Villanous characters” ಎಲ್ಲಿ?? ಇನ್ನ ಕೆಲವೊಮ್ಮೆ ಕೇಡಿ ತಂದೆಯ ಕುಡುಕ ಮಗ ಮತ್ತು ಅವನ ಸಂಗಡಿಗರೊಂದಿಗಿರುತ್ತಿದ್ದ ರೀಟಾ,ಶೀಲಾ,ಜೂಲಿ ಗಳಿಗೆ ವಯಸಾಯ್ತು ಅಂತ Permanent VRS ಕೊಟ್ಟಿರ್ಬೇಕು!

Friends…. ನಿಮಗೆಲ್ಲ ಒಂದು ಸ್ಪೆಶಲ್ Surprise  ಅಂತ ಹೇಳಿ “ಜಯಮಾಲಿನಿ”, “ಡಿಸ್ಕೋಶಾಂತಿ”ಯರ Introduction ನಿಂತು ದಶಕಗಳೇ ಕಳೆದಿವೆ!

ಅಪ್ಪಿ ತಪ್ಪಿ ಈ “ಜಯಮಾಲಿನಿ” “ಡಿಸ್ಕೊ ಶಾಂತಿ” ಯಾರು ಅಂತ ನೀವು ಕೇಳಿದ್ರೆ ದಯವಿಟ್ಟು ಓದ್ತಾ ಇರೋದನ್ನ ನಿಲ್ಸೀ ಯಾವುದಾದ್ರೂ ಒಂದ್ ಹಳೇ ಚಲನಚಿತ್ರವನ್ನ ನೋಡಬೇಕಾಗಿ ವಿನಂತಿ! ಹಾಡೋದಕ್ಕೆ “ಎಸ್ ಪಿ ಬಿ” “ಪೀ ಬಿ ಸ್” ಇದ್ದರು! ಸಧ್ಯಕ್ಕೆ ನಾಯಕರೇ ಗಾಯಕರು, ನೀವ್ ಕೇಳ್ತೀರೋ ಕಿವಿ ಮುಚ್ಕೋತೀರೋ ನಿಮಗೆ ಬಿಟ್ಟಿದ್ದು.

“ಸದುಪಯೋಗ” ಮತ್ತು “ಸದ್ಬಳಕೆ” ಎರಡು ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಮಾಯವದಂತಿವೆ! Quality Cinema expect  ಮಾಡೋದು ಹೇಗೆ ಪ್ರತಿಯೊಬ್ಬ ಪ್ರೇಕ್ಷಕನ ಹಕ್ಕು, ಹಾಗೆಯೇ “ನಮ್ಮ” ಕಲಾವಿದರ “ಸಾಮರ್ಥ್ಯಕ್ಕೆ” ತಕ್ಕ “ಸಂಭಾವನೆ” ನೀಡುವುದು ಕೂಡ ಚಿತ್ರ ನಿರ್ದೇಶಕನ ಜವಾಬ್ದಾರಿ! ಸಂಭಾವನೆ ಕೇವಲ “ಬಾಂಬೆ” “ಲಾಂಗು ಮಚ್ಚು” “ಅಣ್ಣ್ ತಮ್ಮನ” Buildup ಗಳಿಗೆ ಮಾತ್ರ ಸೀಮಿತವಾಗಿರದೇ, ಕಲಾವಿದನ “ಸಂಸಾರ ಮತ್ತು ಕಲಾ ಜೀವನ” ತೂಗಿಸುವ ಮಟ್ಟಕ್ಕಿರಲಿ!

ನಿಮ್ಮೊಳಗೊಬ್ಬ

ನಾನು

Advertisements

ಇವತ್ತ್ ಸೆನ್ಸಾರ್ ಆಮೇಲ್ ರಿಲೀಸ್

ನಾನು ಒಂದ್ ಹೊಸ ಬೈಕ್ ತಕೊಂಡಿದೀನಿ ನೋಡಿ ಅಂತ ಖುಷಿ ಖುಷಿಯಾಗಿ ಎಲ್ಲರೊಡನೆ ಶೇರ್ ಮಾಡಿಕೊಂಡ ಪ್ರತಿಬಾವಂತ “ಕಾರ್” ನಿರ್ದೇಶಕ, ದೋಸೆಗೆ ಆರ್ಡರ್ ಕೊಟ್ಟು ವರ್ಷಗಳೇ ಕಳೆದಿವೆ. ಗ್ಯಾಸ್ ಕನೆಕ್ಷನ್ ಸಿಗದೇ ಸಂಪಳ ಹಳಸಿ ಕೊನೆಗೆ ಹೋಟೆಲ್ ಮುಚ್ಚುವ ಪರಿಸ್ಥಿತಿ ಎದುರಾದರು ಅವರು “ಕಾಯುವ ಕಾಯಕ”ನಿಲ್ಲಿಸಿಲ್ಲ. ಬನ್ನಿ ನಮ್ಮೊಟ್ಟಿಗೆ ಸೇರಿ ಬೇರೆ ದೋಸೆ ತಿನ್ನೋಣ ಅಥವಾ ಉಪ್ಪಿಟ್ಟು ಕೇಸರಿಬಾತ್ ತಿಂದು ಕಾಫಿ ಕುಡಿಯೋಣ ಅಂದರೆ ಇವರು ಸುತರಾಂ ಒಪ್ಪುತ್ತಿಲ್ಲ. ದೇಶ ಕಟ್ಟಿ ರಾಜ್ಯ ಆಳಿದೊರನ್ನೇ ನಮ್ ಜನ ಮರೆತುಬಿಟ್ಟರು ಇನ್ನಾ…

ಒಬ್ಬ ನಿರ್ದೇಶಕನ ಸೋಲು ಅಥವಾ ಗೆಲುವು ತಾವು ಮುಂದೆ ಮಾಡುವ ಅಥವಾ ಹಿಂದೆ ಮಾಡಿರುವ ಚಿತ್ರಗಳ ಮೇಲಷ್ಟೆ ಅವಲಂಬಿತವಾರಿಗುವುದಿಲ್ಲ. ಒಬ್ಬUpdate ಆಗದ ನಿರ್ದೇಶಕ, Improvisation ಬಯಸದ ನಟನ ಸಿನಿ ಪಯಣ ಬಹು ಬೇಗ ಅಂತ್ಯಗೊಳ್ಳುತ್ತದೆ. “Adaptability” ಅನ್ನೋದು ಸಧ್ಯದ ಪರಿಸ್ಥಿತಿಯಲ್ಲಿ ಕೇವಲ ಸಾಫ್ಟ್ ವೇರ್ ಪ್ರಪಂಚಕ್ಕೆ ಮಾತ್ರ ಸೀಮಿತವಾಗಿರದೆ ಚಿತ್ರ ಜಗತ್ತಿಗೂ ಅನ್ವಯಿಸುತ್ತದೆ. ಒಬ್ಬ ಬರಹಗಾರ ಅಥವಾ ನಿರ್ದೇಶಕನ ವಿವೇಚನಾ ಶಕ್ತಿ ಅಥವಾ “Initial Stages of Script” ರೂಪುಗೊಳ್ಳುವುದು, ತಾವು ಸುತ್ತ ಮುತ್ತಲಿನ ಪರಸಿರವನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ ಅಥವಾ ತಾವು ಕಂಡು ಕೇಳಿರುವ ಘಟನೆಗಳ ಕುರಿತಾಗಿ ಕೊಂಚ ಭಿನ್ನವಾಗಿ ಚಿಂತಿಸುವ ಸಾಹಸ ಮಾಡಿದಾಗ.

ಇತೀಚಿನ ದಿನಗಳಲ್ಲಿ ನಿರ್ದೇಶಕರು “ನಿಮ್ ಸಿನಿಮಾ ಯಾಕ್ ನೋಡ್ಬೇಕು”?? ಅನ್ನೋ ಪ್ರಶ್ನೆಗೆ “ನಟಿವಿಟಿಗೆ ತಕ್ಕಂತೆ, ಅವರನ್ನ Different ಆಗಿ ತೋರ್ಸಿದೀವಿ, ಯುರೋಪ್ನಲ್ಲಿ ಶೂಟಿಂಗ್” ಅನ್ನೋ Ready made ಉತ್ತರಗಳನ್ನ ಕೊಡುತ್ತಾರೆ. ಪ್ರೇಕ್ಷಕ ಕೊಡುವ ಕಾಸಿಗೆ ನಿರ್ದೇಶಕ Justification ಕೊಡುವ ಕಾಲ ನಿಂತು ಹೋಗಿವೆ. ಇನ್ನ ಗಾಂಧಿನಗರದ ನಿರ್ಮಾಪಕರ ವಿಚಾರಕ್ಕೆ ಬಂದರೆ ಕೆಲವರನ್ನ ಹೊರತು ಪಡಿಸಿ ಬಹುಪಾಲು ನಿರ್ಮಾಪಕರು ಹಣ ಹೂಡುವ ಮುನ್ನ “Entry and Exit” Criteria ಗಳ ಬಗ್ಗೆ ಕೊಂಚವೂ ಆಸಕ್ತಿ ತೋರಿಸುತ್ತಿಲ್ಲ. ಸಿನಿಮಾಕ್ಕೆ ಹಣ ಹೂಡುವ ಮುನ್ನ ಇಂತಿಷ್ಟು ಖರ್ಚು ಮತ್ತು ಅಪ್ಪಿ ತಪ್ಪಿ ಸಿನಿಮಾ ನಿಂತು ಹೋದರೆ ಅಥವಾ ತೆರೆಗೆ ಬರುವ ಮುನ್ನ ತೊಂದರೆಗಳಾದರೆ ಅದರಿಂದ ಹೊರ ಬರುವ ಬಗ್ಗೆ ಹೇಗೆ ಎಂಬ ವಿಷಯಗಳನ್ನು ಆಲೋಚಿಸುತ್ತಿಲ್ಲ.

ಒಟ್ಟಾರೆ ಒಬ್ಬ ಚಿತ್ರ ನಿರ್ದೇಶಕ ಸತತವಾಗಿ ಚಾಲ್ತಿಯಲ್ಲಿದ್ದು ಉತ್ತಮ ಚಿತ್ರಗಳನ್ನು ನಿರ್ದೇಶನ ಮಾಡುವುದಕ್ಕೆ ಆತನ “Financial Strategies‘ ಪಕ್ಕವಾಗಿರಬೇಕು. ಸೂಕ್ಷ್ಮವಾಗಿ ಗಮನಿಸಿದರೆ ದಕ್ಷಿಣ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟರು ಮತ್ತು ನಿರ್ದೇಶಕರು ಹಳೆಯ ಆಲದ ಮರಕ್ಕೆ ಜೋತು ಬೀಳದೆ “Alternate Career Options’ ಹುಡುಕಿಕೊಂಡಿದ್ದಾರೆ ಅನ್ನುವುದು ಸಮಾಧಾನಕರ ಸಂಗತಿ.ಈ ತತ್ವ  “ದನ ಕಾಯೋನು” ಇಂದ ಹಿಡಿದು “ಒಂಟಿ ಮನೇಲಿ ದೊಡ್ಡ್ ದೊಡ್ಡ ” ಮಂದಿಯವರೆಗೂ ಅನ್ವಯಿಸುತ್ತದೆ.

ನಿಮ್ಮೊಳಗೊಬ್ಬ
ನಾನು

ಅನ್ನದಾತ ಮತ್ತು ಬಿಸ್ಲೇರಿ ಬದುಕು

ಕುಡಿಯೋಕೆ ಬಿಸ್ಲೇರಿ ನೀರೆ ಬೇಕಾ?? ಬೋರ್ ವೆಲ್ ನೀರು ಕೊಟ್ಟರೆ ಒಳಕೊಗಲ್ಲ ಅನ್ತುದಾ??…..

ವಾಹಿನಗಳಿಗೆ ಇದೊಂದು ಭರ್ಜರಿ ಭೋಜನ. ಅನಾಮತ್ತು 250 ಕನ್ನಡ ಚಲನ ಚಿತ್ರರಂಗದ ಅನ್ನದಾತರು ಧರಣಿ ಮಾಡಿ ತಮ್ಮ “ಸಮಸ್ಯೆ” ಬಗೆಹರೆಯುವವರೆಗೂ “ಪಾನೀಯ” ಪೋಟುಕೊಳ್ಳುವುದಿಲ್ಲ ಎಂದು ಸುದ್ದಿ ಬಿತ್ತರಿಸಿದವು. ಅಲ್ಲಿಗೆ ವ್ಯವಸ್ಥಿತವಾಗಿ ಒಂದು ಪಿಡುಗನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ದುರುದ್ದೇಶ ಇದಾಗಿದೆಯೆಂದು ಯಾವ ವಾಹಿನಿಯು ಪ್ರತಿಪಾದಿಸಲಿಲ್ಲ! ಧರಣಿ ನಿರತ ಅನ್ನದಾತರಾರು ದಾಖಲೆ ಪತ್ರಗಳೊಂದಿಗೆ ಅಲ್ಲಿಗೆ ಬಂದಿರಲಿಲ್ಲ. “ನೋಡಿ ನಾವ್ ಇಷ್ಟ್ ಚೆನ್ನಾಗಿ ಸಿನಿಮಾ ಮಾಡಿದೀವಿ, ಜನ ಒಪ್ಪ್ ಕೊಂಡು ಸಿನಿಮಾ ಸಕ್ಸೆಸ್ ಆಗಿದೆ ಆದ್ರೂ  ಟೀವಿನವರು ಅದನ್ನ ಕೊಂಡುಕೊಳ್ಳಲು ರೆಡಿ ಇಲ್ಲ” ಅಂತ ಒಬ್ಬರು ಹೇಳಲಿಲ್ಲ.

ಮುಂಚೆ ಒಂದು ರುಪಾಯಿ ಕೊಟ್ರೇ ತಕೊತಿದ್ರು ಈಗ ಹತ್ತು ರುಪಾಯಿ ಕೇಳ್ತಾರೆ ಅನ್ನೋ ದೊಡ್ಡವರ ಮಾತಿಗೆ ಅಲ್ಲಿ ಘಂಟಾಘೋಷವಾಗಿ “ಡೌನ್ ಡೌನ್ ಅಮರನಾಥ್ ಡೌನ್ ಡೌನ್ ಅಮರನಾಥ್ ” ಎಂದು ಕೂಗಲಾಯಿತು. ಇನ್ನಾ ಮುಂದಕ್ಕೆ ಹೋಗಿ ಒಬಾತ “ಐ ಆಮ್ ಏ ಡಿಗ್ರಿ ಸ್ಟೂಡೆಂಟ್ “…  ಎಂದು ಅರಚುತ್ತಾ, ತಾನು ಒಬ್ಬ ನಿರ್ಮಾಪಕ ಸಾಕಷ್ಟು ಸಮಸ್ಯೆಗಳಿದ್ದರೂ ಸಿನಿಮಾ ಮಾಡುವುದನ್ನು ನಿಲ್ಲಿಸಿಲ್ಲ ನಾವು ಅನ್ನದಾತರು ನಮ್ಮನ್ನು ಕಡೆಗಣಿಸಬೇಡಿ ಎಂದು ಅವಲತ್ತು ತೋಡಿಕೊಂಡರು. ಕೊಂಚ ತಬ್ಬಿಬಾದ ಕನ್ನಡ ಚಿತ್ರರಂಗದ “ಸಕ್ರಿಯ ಪ್ರೇಕ್ಷಕ” ಈತ ಯಾರು ಎಂದು ಹುಡುಕಿದರೆ ಸಿಗುವುದು ಒಂದು ಬಾಟಲ್ ಬಿಸ್ಲೇರಿ ಮತ್ತು “ಒಲವಿನ ಓಲೆ!” ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಕ್ಸೆಸ್ ಕಂಡ ಸಕ್ರಿಯ “ಗಂಡುಗಲಿ”ಗಳರಾರು ಅಲ್ಲಿ ಕಾಣಲಿಲ್ಲ. “ಶಿವಂ”ಎಂದವರು, ಕರ್ನಾಟಕದ ಅಷ್ಟೂ ಜನತೆಗೆ “ಬಚ್ಚನ್” ಭಾಗ್ಯ ಕೊಟ್ಟವರು ಮತ್ತು ಸತತವಾಗಿ ತಮ್ಮ ಬದುಕಿನುದ್ದಕ್ಕೂ ಅದೇ ತಡೆಗಳನ್ನು ಮೀರಿ ” ಗೆದ್ದ ಮಗ” ಎಂದು ಕನ್ನಡಿಗರು ಪ್ರೀತಿಯಿಂದ ಕೊಟ್ಟ ಮುಕುಟ ಧರಿಸಿದ “ಪ್ರಚಂಡ ಕುಳ್ಳ ” ಕೂಡ ಕಾಣಿಸಲಿಲ್ಲ.

ದಿನಕ್ಕೆ ಮೂವರಂತೆ ಉಪವಾಸ ಕುಳಿತ ಪುರುಷೋತ್ತಮರ ಪವಾಡಗಳನ್ನು ಕನ್ನಡ ಜನತೆ ತಿರಸ್ಕರಿಸಿ ದಶಕಗಳೇ ಕಳೆದಿವೆ. “ಭಾನಾಮತಿ’,”ಅಪಹರಣ” “ವೈದೇಹಿ” ಮುಂತಾದ ಹಿಮಾಲಯ ಪ್ರಾಡಕ್ಟ್ಟು ಇವರು ಕನ್ನಡಿಗರಿಗೆ ಅರ್ಪಿಸಿದ ಗಿಫ್ಟು. ಹಿಂದೊಮ್ಮೆ ಟೀವಿ ಹಕ್ಕುಗಳನ್ನು ನಂಬಿಕೊಂಡು ಸಿನಿಮಾ ಮಾಡ್ತೀನಿ ಅಂತ ನನ್ನ ಹತ್ರ ಬರಬೇಡಿ ಎಂದು ನಟನೆಯ ಜೊತೆ ನಿರ್ಮಾಣ ಕೂಡ ಮಾಡಿರುವ ನಟರೊಬ್ಬರು ಹೇಳಿದ್ದರು. ತಮ್ಮ ಹೆಸರನ್ನು ಬಳಸಿಕೊಂಡು ವಾಹಿನಿಯವರ ಬಳಿ “Satellite” ಒಪ್ಪಂದ ಮಾಡಿಕೊಂಡು ಸಿನಿಮಾ ಬಿಡುಗಡೆ ಮಾಡಲು ಕಾಸಿಲ್ಲದೆ ಕೊನೆಗೆ ನಟರು ತಮ್ಮ ಸಂಭಾವನೆ ಬಿಟ್ಟು ಚಿತ್ರ ಬಿಡುಗಡೆಯಾಗಲು ಹಣ ಕೊಟ್ಟಿರುವ ಉದಾರಣೆ ಸಾಕಷ್ಟಿವೆ. ಸ್ನೇಹ ಜೀವಿ ನಟರು ಕಿಲುಬು ಕಾಸು ಪಡೆಯದೇ ಕಷ್ಟದಲ್ಲಿರುವ ಅನ್ನದಾತರನ್ನು ಕಾಪಾಡಿದ ಅನೇಕ ಸಂಗತಿಗಳು ಇಂದಿಗೂ ಸುದ್ದಿಯಗದೆ ಸುಮ್ಮನಿವೆ. ಕಿರುತೆರೆಯಲ್ಲಿ ಕಾರ್ಯಕ್ರಮ ಮಾಡ ಕೂಡದು ಎನ್ನುವ ನೈತಿಕ ಹಕ್ಕನ್ನು ಪವಾಡ ಪುರುಷರು ಎಂದೋ ಕಳೆದು ಕೊಂಡಿದ್ದಾರೆ.

ಅಸಲಿಗೆ ಸಮಸ್ಯೆ ಏನು ಎಂದು ಕೆದಕ್ಕುತ್ತಾ ಹೋದರೆ ಸಿಗುವುದು ಅದೇ “ಡಬ್ಬಿಂಗ್” ಪಿಡುಗು. ಇಂತಹ ಪಬ್ಲಿಸಿಟಿ ಪಾರ್ಟಿ ಕಟ್ಟಿ ಅದನ್ನು ವಾಹಿನಿಗಳಿಗೆ ಬಿತ್ತರಿಸುವ ಉದ್ದೇಶ ಇವರದು. ಪರಭಾಷಾ ಸರಕನ್ನು ತಂದು lip sync ಮಾಡಿ ಸುಲುಭವಾಗಿ ದುಡ್ಡು ಮಾಡಿಕೊಳ್ಳುವ ಇಚ್ಚೆಯುಳ್ಳ ವರ್ಗ ಸಧ್ಯಕ್ಕೆ ಇದೊಂದು ವಾಮ ಮಾರ್ಗಕ್ಕೆ ಕೈ ಹಾಕಿದೆ. ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಲು ಖರ್ಚಾಗುವ ಮೊತ್ತ 15-20 ಲಕ್ಷ. ಒಬ್ಬ ಸೋನು ನಿಗಮ್ ಅಥವಾ ಕೈಲಾಶ್ ಖೇರ್ ಹಾಡನ್ನು ಕಡಿಮೆ ದುಡ್ಡಿಗೆ ಕನ್ನಡದಲ್ಲಿ ಹಾಡಿಸಬಹುದು! ಇಂಥ ಹಾಡಿನಲ್ಲಿರುವ quality ಯನ್ನು ಕನ್ನಡಿಗ enjoy ಮಾಡಬೇಕೇ ?? ಒಂದು ತಮಿಳು ಅಥವಾ ತೆಲುಗು ಚಿತ್ರ ತನ್ನ ಮೂಲ ಭಾಷೆಯಲ್ಲಿ ಬಿಡುಗಡೆಯಾಗಿ ಇತರ ಭಾಷೆಗಳಿಗೆ ಡಬ್ ಆಗಿ (ಕನ್ನಡವೂ ಸೇರಿ) ತೆರೆ ಕಂಡರೆ ಕನ್ನಡ ಚಿತ್ರಗಳ ಕಥೆ ಏನು??

ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡಿಗರು ಖುಷಿ ಪಡಬೇಕಾದ ಅನೇಕ ಸಿನೆಮಾಗಳು ಬಂದಿವೆ, ಮುಂದೆ ಬರುವ ಭರವಸೆ ಕೂಡ ಮೂಡಿಸಿವೆ. ಸಾಲು ಸಾಲಾಗಿ ಗುಣಮಟ್ಟ ಸುಧಾರಿಸುವ “ಮೈತ್ರಿ”ಗಳು ನಡೆಯುತ್ತಿವೆ.ವಿಭಿನ್ನ ಕಥೆಗಳನ್ನು “ಕನ್ನಡಿಗರಿಂದ ಕನ್ನಡಕ್ಕಾಗಿ ಕನ್ನಡಿಗರಿಗೋಸ್ಕರ” ಸಾಕಾರ ಮಾಡುವ ಉತ್ತಮ ನಿರ್ದೇಶಕರು ಹಾಗು ನಿರ್ಮಾಪಕರು ಬರತೊಡಗಿದ್ದಾರೆ. “ನಾಗವಾರ”ಕ್ಕೂ “ಜೆ ಪಿ ನಗರ”ಕ್ಕೂ ತಂದಿಟ್ಟು ತಮಾಷೆ ನೋಡಿತ್ತಿದ್ದ ಮೀರ್ ಸಾದಿಕರನ್ನ ಒದ್ದೋಡಿಸಲಾಗಿದೆ. ಇದು ತಪ್ಪು ಇಂತಹದ್ದನ್ನ ಮಾಡಿದರೆ ಮತ್ತೆ “ಶ್ರೀರಾಮ ಪುರ’ಕ್ಕೆ ಮರಳಬೇಕಾಗುತ್ತದೆ ಎಂದು ಎಚ್ಚರಿಸುವ ಧೀಮಂತ ಕನ್ನಡಿಗ ನಟರು ನಮ್ಮಲಿದ್ದಾರೆ.

ಪ್ರೇಕ್ಷಕ ಪ್ರಭು ಎಂದಿಗೂ ಪವಾಡ ಪುರುಷರನ್ನ ಮತ್ತು “ಚಮಚ” “ತಟ್ಟೆ’ “ಲೋಟಗಳನ್ನ” ಲೆಕ್ಕಕ್ಕೆ ತೆಗೆದು ಕೊಳ್ಳುವುದಿಲ್ಲ, ಹಂದಿ ತರಹ ಹತ್ತು ಹೆರೊ ಬದಲು ಕಾಮಧೇನು ತರಹ ಒಂದೊಂದೇ ಹೆರೋಣ ಅಂತ ತಟ್ಟಸ್ಥರಾಗಿ “ಎರಡನೆ ಸಲ” ಮತ್ತೊಂದು “ಪುಟಾಣಿ ಪಂಟರ” ಜೊತೆ ಕುಣಿದಾಡುತ್ತ ಬುದ್ಧಿವಂತರೊಬ್ಬರು ನಿಶ್ಚಿಂತೆಯಾಗಿದ್ದಾರೆ.

ನಿಮ್ಮೊಳಗೊಬ್ಬ
ನಾನು

ಜಾಗತೀಕರಣ ಮತ್ತು ಟ್ಯಾಟೂ

ಇಸವಿ 1990ರ ಆಸುಪಾಸು! ಪ್ರೈಮರೀ ಸ್ಕೂಲಿನ ಮಧ್ಯ ವಾರ್ಷಿಕ ಪರೀಕ್ಷೆ ಅಣತಿ ದೂರದಲ್ಲಿತ್ತು. ನಮ್ಮೂರು  ಗ್ರಾಮದೇವತೆ ಸಮಾರಂಭಕ್ಕೆ ಸಜ್ಜಾಗಿ ನಿಂತಿತ್ತು. ಪರೀಕ್ಷೆಯ ಬಗ್ಗೆ ಯೋಚಿಸದ ನನಗೇ ಸಂಜೆ ನಡೆಯುವ ಆರ್ಕೆಸ್ಟ್ರಾ ಮತ್ತು ರಾತ್ರೀ ನಮ್ಮೂರಲ್ಲಿ ಎಲ್ಲರೂ ನೋಡಲಿಕ್ಕೆ ವೀಡಿಯೋ ಕ್ಯಾಸೆಟ್ ಹಾಕುತ್ತಾರೆ ಎಂಬ ಸಿರಿ. ಆರ್ಕೆಸ್ಟ್ರಾ ನಡೆಯುತ್ತಿದ್ದ ಹಾಗೇ ಕಪ್ಪು ಕಾರಿನಲ್ಲಿ ನನ್ನ ಆರಾಧ್ಯ ದೈವ “ಅಂಬಿ” ಮಾಮನ ಎಂಟ್ರೀ. ಕುಣಿದು ಕುಪ್ಪಳಿಸಿ ಎಲ್ಲರ ಮಧ್ಯೆ ತೂರಿಕೊಂಡು “ರೆಬಲ್”ನನ್ನು ಹತ್ತಿರದಿಂದ ನೋಡಿ,ತಂದಿದ್ದ ಒಂದಷ್ಟ್ತು ಹೂವನ್ನು ಎರಚಿ ಸಂಭ್ರಮಿಸಿದ್ದನ್ನು ನಾನೆಂದೂ ಮರೆಯಲಾರೆ. ಕಾಲಚಕ್ರ ತಿರುಗಿದಂತೆ ಈ ತರಹದ ಸಂಭ್ರಮಕ್ಕೆ “ಜಾಗತೀಕರಣ” ಎಂಬ ಆಶೀರ್ವಾದ ಒಂದು ಪೂರ್ಣ ವಿರಾಮ ನೀಡಿತ್ತು.

ಜಾಗತೀಕರಣದ ಜಾಡು ಹಿಡಿದು ಹೊರಟಾಗ ನನಗೆ ಕಂಡ ಮೊಟ್ಟ ಮೊದಲ ವಸ್ತು “ಟ್ಯಾಟೂ.” ಪೇಟೇಯಾದರೂ ಸೈ ಹಳ್ಳಿಯಾದರೂ ಸೈ ಪ್ರೇಮಿಗಳನ್ನು,ದೈವ ಭಕ್ತರನ್ನು ಮತ್ತು ಸಂಭಂದಗಳನ್ನು ವ್ಯಕ್ತಪಡಿಸುತ್ತಿದ್ದ ಮೊದಲ ಮಾಧ್ಯಮ “ಹಚ್ಚೇ.” ರಟ್ಟೆಯ ಮೇಲೆ ಎದೆಯ ಮೇಲೆ ಹಸಿರು ಬಣ್ಣದ ಹೆಸರು, ಸಂಭಂದಗಳ ಉಸಿರಾಗಿತ್ತು ಈ “ಹಚ್ಚೇ.”

ಕ್ರಮೇಣ ಹಚ್ಚೇ ಹಾಕುವರು ಮರೆಯಾಗಿ ಹೊಸದೊಂದು ಪ್ರವೃತಿ ಶುರುವಾಯಿತು. ಬಬಲ್ ಗಮ್ ಕೊಂಡ ಮಕ್ಕಳಿಗೆ ಚಿಟ್ಟೆಯ ಚಿತ್ರ ಬಿತ್ತರಿಸಿ ಶುರುವಾದ ಸಂಗತಿ, ದೊಡ್ಡ ದೊಡ್ಡ ಅಂಗಡಿ ತೆರೆದು ಸಾವಿರಕ್ಕೆ ಮೂರು ಸಾವಿರಕ್ಕೆ ವಿಧ್ಯಾರ್ಥಿಗಳನ್ನು, ಉದ್ಯೋಗಸ್ಥರನ್ನು,ಬುದ್ಧಿ ಜೀವಿಗಳನ್ನು ಸೆಳೆದು ಅವರ ಅಂಗಾಂಗಗಳ ಮೇಲೆ ಸೃಜನಶೀಲ ಕೆತ್ತನೆಗಳನ್ನು ಮಾಡಲಾಯಿತು.  ಇವೆಲ್ಲದರ ಮಧ್ಯೆ ಬಂಡವಾಳಶಾಹಿ ಗುಂಪುಗಳಿಗೆ ತಂಗಾಳಿಯಂತೆ “ಕೈ”ಕೃಪಾ ಕಟಾಕ್ಷ ಒಲಿದು ಚಿನ್ನದ ಚಿದಂಬರನ ಖಾಸಗೀಕರಣದ ಕೂಸಿಗೆ ಕುಲಾವಿ ಹೋಲಿಸಿದ್ದು ಆಯಿತು. ಕೈ ಬಿದ್ದು ಕಮಲ ಅರಳಿದರು ಪ್ರಯೋಜನವಾಗಲಿಲ್ಲ ಸರಕಾರ ಬೇರೆ ಸವಾಲುಗಳು ಅವೇ! 

ದೇಶದ ಬೆನ್ನೆಲುಬು ಅನ್ನಿಸಿಕೊಂಡ ಕೃಷಿಯನ್ನು ಕಡೆಗಣಿಸಿ, ಐಟಿ ಬೀಟಿಯ ಬೀಜವನ್ನು ಬಿತ್ತಿದಾಯಿತು. ಇವೆಲ್ಲದರ ಪರಿಣಾಮ ಪಧವೀದಾರರಾಗಲೇಬೇಕು ನೌಕರಿ ಸಿಗಲಿಕ್ಕೆ ಎನುತ್ತಿದ ಯುವಜನತೆ ಐನೂರರ ಮೊಬೈಲ್ ಹಿಡಿದ್ದು ಸೇರಿಕೊಂಡಿದ್ದು  “ಚಂದಾದಾರರು ಬಿಜಿಯಾಗಿದ್ದಾರೇ” ಎಂಬ ಮಾಹಿತಿ ನೀಡಲು.

ಜಾಗತೀಕರಣ ಒಳ್ಳೆಯದ್ದೋ ಕೆಟ್ಟದ್ದೋ ಇದು ಬಹು ಚರ್ಚಿತ ವಿಷಯ. ಇದರ ಬಗ್ಗೆ ಮಾತನಾಡುತ್ತಾ ಹೋದಲ್ಲಿ ನಾವು “ಮುಕ್ತ ಮುಕ್ತ”ರಾಗ ಬೇಕಾದ ಪರಿಸ್ಥಿತಿ ಉಂಟಾಗಬಹುದು.  ಜಾಗತೀಕರಣದ ಜಾಲದಲ್ಲಿ ಸಿಕ್ಕಿ ಸಂಭಂದಗಳು ಹಳಸಿವೆ. ಅಜ್ಜಿ ತಾತನ ಜೊತೆ ಕಳೆಯುತಿದ್ದ ಸಮಯವನ್ನು ಶಾಪಿಂಗ್ ಮಾಲ್ ಗಳು ಸೆರೆ ಹಿಡಿದಿವೆ. ಒಂಬತ್ತರಿಂದ ಹತ್ತರ ಒಳಗೆ ಮನೆ ಸೇರುತ್ತಿದ್ದ ಪಕ್ಕದ ಮನೆ ಸಾವಿತ್ರಮ್ಮನ ಮಗಳು ಈಗ ಮಲ್ಟೀಪ್ಲೇಕ್ಸ್ನಲ್ಲಿ  ಸಿನಿಮಾ ನೋಡಿಕೊಂಡು ತಡ ರಾತ್ರೀ ಮನೆಗೆ ಬರಲು ಫಾರಿನ್ ಕಂಪನೀ ಅಗ್ಗದ ಕಾರ್ ಕೊಳ್ಳಲು ಸುಲಭವಾಗಿ ಕಂತನ್ನು ನೀಡುತ್ತಿವೆ. ಆಶ್ಚರ್ಯವೆನಿಸಿದರೂ ಬಲಾತ್ಕಾರಗಳು ಬಸ್ಸಿನಲ್ಲಿ ಕೂಡ ನಡೆಯುತ್ತಿವೆ.

ಇವೆಲ್ಲರ ಮಧ್ಯೆ ನನ್ನೊಳಗೆ ಹುಟ್ಟಿಕೊಂಡ ಪ್ರಶ್ನೆ

ಅಂತರಂಗ ಜಾಗತೀಕರಣವೆಂದು??ಪಯಣ ಹೀಗೇಕೆ??

ಬಹುಶಃ ಹಾಗೇ ಆಗಬಾರದಿತ್ತೇನೋ. ಒಬ್ಬ ಒಳ್ಳೆ ಗೆಳೆಯನ್ನ ಕಳೆದುಕೊಂಡುಬಿಟ್ಟೆ! ಸಣ್ಣದೊಂದು ಬಿರುಕು ಸಾಕಿತ್ತು    ಮನಸ್ಸುಗಳನ್ನ ಬೇರೆ ಮಾಡಲು. ಅವನು ಹೇಳಿದ್ದು ತಪ್ಪಾ ಅಥವಾ ಅಂದಿನ ಕ್ಷಣಕ್ಕೆ ನಾ ಯೋಚಿಸಿದ ರೀತಿ ತಪ್ಪ  ತಿಳಿಯದು.  ಕಾಲ ಚಕ್ರದಡಿಗೆ ಸಿಲುಕಿ ಬೇರೆಯಾದರೂ ಮನಸ್ಸುಗಳು ಮಾತ್ರ ಇಂದಿಗೂ ನೋಡಲು   ಮಾತನಾಡಲು   ಹಾತೊರೆಯುತ್ತವೆ.

ಬೆಂಗಳೂರಿನಷ್ಟು ದೊಡ್ಡ ಪಟ್ಟಣವಲ್ಲ ನಮ್ಮೂರು. ಬೆಳಿಗ್ಗೆ ವ್ಯಾನ್ ಹತ್ತಿ ಶಾಲೆ ಸೇರಿಕೊಂಡರೆ ಸಂಜೆ  ಮೂರು   ಮುಕ್ಕಾಲಿಗೆ ಸರಿಯಾಗಿ ಬೆಲ್ಲು. ಡಬ್ಬಿಯಲ್ಲಿ ಮಧ್ಯಾನಕ್ಕೆ ದೋಸೆ ಅಥವಾ ಇಡ್ಲಿ ಕೊಟ್ಟರೇ ಅದು ಸೇರುತಿದದ್ದು ದೊಡ್ಡ ಮೋರಿಗೆ. ಸಂಜೆ ಕಡ್ಡಾಯವಾಗಿ  ಪಾರ್ಕ್‌ಗೆ ಸೀನ,ಗುರು,ಅನಂತ ಮತ್ತು ನಾನು ಹಾಜರ್. ಅಪ್ಪಿ ತಪ್ಪಿ ಮಾರ್ಕ್ಸ್ ಕಾರ್ಡ್ ಅಮ್ಮನ ಕೈಗೆ ಸಿಕ್ಕರೆ ಆಟ ಕಟ್. ಮಾರ್ಕ್ಸ್ ಕಾರ್ಡ್ ಕೊಟ್ಟಿಲ್ಲ ಇನ್ನ ಟೆಸ್ಟ್ ಪೇಪರ್ ಕೊಟ್ಟಿಲ್ಲ ಅಂದ್ರೆ ಶಿವು ಮನೆಗೆ ಪಕ್ಕಾ ಫೋನ್ ಫಿಕ್ಸು. ಎಂದಿಗೂ ಸುಳ್ಳು ಹೇಳದ ಶಿವ ನನ್ನ ಪಾಲಿನ ಡೇಂಜರ್ ಮ್ಯಾನ್ ಆದರೇ ಅದಕ್ಕೂ ಮೇಲಾಗಿ  ಬೆಸ್ಟ್ ಫ್ರೆಂಡ್.

ಪ್ರೈಮರೀ ದಾಟಿ ಹೈ ಸ್ಕೂಲ್ ಎಂಬ ಪ್ರೌಢಾವಸ್ಥೆಗೆ ಕಾಲಿಡುತ್ತಿದಂತೆ ಕೆಲವು ಹೊಸ ಗೆಳೆಯರ ಪರಿಚಯ ಹಳೇ ಗೆಳೆಯರ ಅಗಲುವಿಕೆ! ಕನ್ನಡ ಬಿಟ್ಟು ನನ್ನ ಪ್ರಥಮ ಭಾಷೆ ಹಿಂದಿ ಕೆಲವರದು ಸಂಸ್ಕೃತ ಮಿಕ್ಕವರು ರನ್ನ, ಪಂಪ, ಪೊನ್ನ. ಈ ಮಧ್ಯೆ ಹಚ್ಚಿಕೊಂಡ ಗೆಳೆಯನ್ನೊಬ್ಬ ಕಳ್ಳತನ ಮಾಡಿ ಸಿಕ್ಕಿಬಿದ್ದ! ನನ್ನ ಬಟ್ಟಲು ಕಣ್ಣುಗಳ ತುಂಬಾ ನೀರು. ಇವನೇಕೆ ಹೀಗಾದ?? ಅಪ್ಪ ಸರ್ಕಾರಿ ನೌಕರ,ನನ್ನಂತೆ ಕಡಿಮೆ ಮಾರ್ಕ್ಸ್ ತೆಗೆದರು ಹೊಡೆಯದ ,ಬೈಯ್ಯದ ಮುದ್ದಿನ ಅಮ್ಮ ಆದರೂ ಇವ ಸಹವಾಸಕ್ಕೆ ಬಿದ್ದು ಪ್ರತಿಭೆ ತೋರಿಸಿದ್ದು ಕಾರ್ ಕಳ್ಳನಾಗಿ.

ಈಗ ನನ್ನ ಸಹಿತ ನನ್ನೆಲ್ಲಾ ಶಾಲೆಯ ಗೆಳೆಯರಿಗೆ ನನ್ನನ್ನು ಸೇರಿಸಿ ಮೂವತ್ತರ ಆಸುಪಾಸು. ಬದುಕನ್ನು ಕಟ್ಟಿಕೊಳ್ಳುವ ಹಟ್ಟಕ್ಕೆ ಬಿದ್ದು ಎಲ್ಲರೂ ದೂರದ ಊರಿಗೆ ಪಯಣಿಸಿದ್ದೇವೆ. ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಭೇಟಿ ಮಾಡಿ ಖುಷಿಪಟ್ಟು ಅವರ ಯಶಸ್ಸಿನ ಕಥೆ ಕೇಳಿ ಸಂಭ್ರಮಿಸಿದ್ದೇವೆ. ಕೆಲವರು ನೆನಪಿಗೆ ಬಾರರು ಇನ್ನಾ ಕೆಲವರು ನೆನಪಿಸ್ಕೊಳ್ಳದೆ ಇದ್ದರೆ ಉತ್ತಮ. ಈ ಮಧ್ಯೆ ತೀರಿ ಹೋದ ನೆನಪಿನ ಗೆಳೆಯ, ತಿದ್ದಿ ತೀಡಿ ಬದುಕಿಗೊಂದು ಅಡಿಪಾಯವಿಟ್ಟು ಅಗಲಿದ ಗುರುಗಳು ಇವರೆಲ್ಲರಿಗೂ ವಂದನೆಗಳು

“ಕಾರ್” ಗೆಳೆಯನ್ನನು ಸೇರಿಸಿ.

ಗೊತ್ತಿಲ್ ಗೊತ್ತಿಲ್ ಕನ್ನಡ ಗೊತ್ತಿಲ್

“ನಾನು” ನನ್ನ ನಿಮ್ಮೆಲ್ಲರ ನಡುವೆ ಮನೆಮಾಡಿರುವ ಮನಸ್ಸಿನ ಮಾಲೀಕ. ಇದನ್ನು ಭಾವನೆಯಾಗಿ,ವ್ಯಕ್ತಿಯಾಗಿ,ಭಾಷೆಯಾಗಿ ಆಲೋಚಿಸುವುದು  ಓದುಗರ ಪ್ರಭುವಿಗೆ ಬಿಟ್ಟ ಅಭಿಪ್ರಾಯ.

ಇದು ನನ್ನ ನಿಮ್ಮೆಲ್ಲರ ನಡುವೆ ನಡೆದ,ನಡೆಯುತಿರುವ, ನಡೆಯಬಹುದಾದ ಕಥೆ!

ಪಧವೀಧರನ ಪಟ್ಟ ಪಡೆದುನಾನುಬದುಕು ಕಟ್ಟಿಕೊಳ್ಳುವ ಹಂಬದಲದಲ್ಲಿ ತನ್ನ ಪುಟ್ಟ ಊರನ್ನು ಬಿಟ್ಟು ರಾಜಧಾನಿಯೆಡೆಗೆ ಕೆಂಪು ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದ. ಅಮ್ಮ  ”ಕಾವೇರಿಅಪ್ಪಸಹೃದಯ ಇಬ್ಬರು ಒಳ್ಳೆದಾಗಲೆಂದು ಬೀಳ್ಕೊಟ್ಟರು. ತನ್ನೊಡನೆ ಕೂಡಿ ಆಡೀ ತನ್ನೂರಿನಲ್ಲೇ ನೆಲೆಸಿದ್ದ ಅವನ ಆಜೀವ ಗೆಳೆಯರಾದ ಚಂದಮಾಮತುಷಾರ ,ತರಂಗ,ಹಳೆ ಟಾಕೀಸು, ಸ್ಕೂಲಿನ ಮನೆ,ಗದ್ದೆ ಬಯಲು,ಸೀಬೇಕಾಯಿ ಜೊತೆಗೆ ಹಲಾವಾರು ಗೆಳೆಯರು ಮತ್ತೆ ನಮ್ಮೊಡನೆ ನಿನ್ನ ರಾಜಧಾನಿಯ ಅನುಭವಗಳನ್ನು ಹಂಚಿಕೊಳ್ಳಲು ಬೇಗ ಬಾ ಎಂದು ಹರಸಿದರು.

ನಾನುರಾಜಧಾನಿಗೆ ಕಾಲಿಡುತ್ತಿದಂತೆ ಒಂದು ವಿಸ್ಮಯ ಲೋಕ ಕೈಬೀಸಿ ಕರೆದ ಅನುಭವ. ಎಲ್ಲ್ಲೆಲ್ಲು ಕಾರುಗಳು, ದೊಡ್ಡ ದೊಡ್ಡ ಕಟ್ಟಡಗಳು ಹತ್ತು ಹಲವಾರು ತಿಂಡಿಯ ಅಂಗಡಿಗಳು. ತಾನು ಇರಬೇಕಾದ ಜಾಗದ ಮಾಹಿತಿ ಖಚಿತಪಡಿಸಿಕೊಂಡು ಅಲ್ಲಿಗೆ ತುಸು ನಿಧಾನವಾಗಿನಾನು” ಸೇರಿಕೊಂಡ. ಅವನ  ಪೇಯಿಂಗ್ ಗೆಸ್ಟ್  ಕೊಟ್ಟಡಿಯನ್ನುಕೇಮ್ ಚೋಜೊತೆ ಹಂಚಿಕೊಳಬೇಕಾಯಿತು.

ಹೊಸ ಭಾಷೆ, ಸ್ನೇಹಿತರು, ಹೊಸ ಬಗೆಯ ಅನುಭವಗಳುನಾನುವನ್ನು ಆಕರ್ಷಿಸಿದವು. ದಿನ್ನಕ್ಕೆರಡು ಬಾರಿ ಅಮ್ಮನಿಗೆ ಕರೆ ಮಾಡಿ ಆಗು ಹೋಗುಗಳನ್ನು ವಿವರಿಸುತಿದ್ದ.  ಕ್ರಮೇಣ ತನ್ನ ಉದ್ಯೋಗದಲ್ಲಿ ಉನ್ನತಿ ಹೊಂದಿ ಹೆಸರುಗಳಿಸಿ ಮತ್ತಷ್ಟು ಹಣ ನೀಡುವ ಬೃಹತ್ ಕಟ್ಟಡವೊಂದರಲ್ಲಿ ನಾನು” ಕೆಲ್ಸಕ್ಕೆ ಸೇರಿಕೊಂಡ. ಇತ್ತ ಹುಟ್ಟುರಿನಲ್ಲಿ ಗೆಳೆಯರಿಗೆ ವಯಸ್ಸಾದರೂ ಕಡಿಮೆ ಸಂಬಳ, ನೆಮ್ಮದಿ ಜೀವನ. “ನಾನುವನ್ನು ಸಂಪರ್ಕಿಸಲು ಪ್ರಯತ್ನಿಸಿದ ಎಲ್ಲ ಗೆಳೆಯರಿಗೂ ಸಿಗ್ಗುತ್ತಿದ ಒಂದೇ ಉತ್ತರಸ್ವಲ್ಪ ಕೆಲಸ ಇದೆ ಆಮೇಲೆ ಫೋನ್ ಮಾಡ್ತೀನಿಅಮ್ಮ ಕಾವೇರಿ ಅಪ್ಪ ಸಹೃದಯನನ್ನು ನೋಡಲು ವಾರಕ್ಕೊಮ್ಮೆ ಬರುತ್ತಿದ್ದ ನಾನುಈಗ ತಿಂಗಳಿಗೊಮ್ಮೆ ಎರಡು ತಿಂಗಳಿಗೊಮ್ಮೆ ಬರಲಾರಂಬಿಸಿದ.

ರಾಜಧಾನಿಯಲ್ಲಿ ಎತ್ತ ನೋಡಿದರು ”HR”,”TN” “PN”,”UP” ಎಂಬ ಬಿರುದಾಂಕಿತ ವಾಹನಗಳು. “ನಾನುಬದಲಾಗಿದ್ದ ಎನ್ನುವುದಕ್ಕಿಂತ ತನ್ನನ್ನು ತಾನು ಎಲ್ಲರೊಳಗೊಂದಾಗು ……….. ” ಎಂಬ ನಾಣ್ನುಡಿಯಂತೆ  ಕನ್ನಡ ಹಾಡುಗಳನ್ನು ಕೇಳುವುದನ್ನು ನಿಲ್ಲಿಸಿದ್ದ. ಚಿತ್ರಾನ್ನ ಮೊಸರನ್ನ ಮುಂಚಿನಂತೆ ರುಚಿಸುತಿರಲ್ಲಿಲ್ಲತನ್ನೊಳಗಿನ ಕ್ರಿಯಾಶೀಲತೆಯನ್ನು ಎಷ್ಟು ಚೆನ್ನಾಗಿ ಅಭಿವೃದ್ದಿಪಡಿಸಿಕೊಂಡು ಶ್ರೀಮಂತನಾಗಿದೇನೆ ಎಂದು ಬೀಗುತಿದ್ದ.

ವರುಷಗಳು ಉರುಳಿದಂತೆ ಗೃಹಸ್ತನಾಗಿ ರಾಜಧಾನಿಯಲ್ಲಿ ಬಂಗಲೆಯೊಂದ ಕೊಂಡು ,ಅಪ್ಪ ಅಮ್ಮ ಕಾಲವಾದ ಮೇಲೆ ಊರಿನಲ್ಲಿದ್ದ ಮನೆ ಜಮೀನುಗಳನ್ನೂ ಮಾರಿ  ಬಂದ ಹಣದಿಂದ ಮಕ್ಕಳ ಮದುವೆ ಮಾಡಿ ಮುಗಿಸಿದ್ದ. ವಯಸ್ಸಾದ ಕಾರಣ  ”ನಾನುವಿಗೆ ದೊಡ್ಡ ಕಟ್ಟಡದ ಕೆಲಸ ಸಿಗುತಿರಲ್ಲಿಲ್ಲ. ಆಜೀವ ಗೆಳೆಯರ ಪೈಕಿ ಕೆಲವರು ಕಾಲವಾಗಿ ಹೋಗಿದ್ದರು.

ಹುಟ್ಟೂರಿಗೆ ಹೋಗಬೇಕೆಂಬ ಬಯಕೆಯಿಂದ ಚಿರಯುವಕನಂತೆ ಉಡುಪು ಧರಿಸಿ ಊರಿಗೆ ಬಂದು ತಲುಪಿದ. ತನ್ನೂರಿನಲ್ಲಿ ತನಗೊಂದು ಸೂರಿಲ್ಲ, ಬಂಧು ಬಳಗವನ್ನು ದೂರವಿಟ್ಟ ತನ್ನನ್ನು ಅವರಾರು ಹತ್ತಿರ ಸೇರಿಸುವುದಿಲ್ಲವೆಂದು ಅರಿವಾಯಿತು. ತಾನು ಆಡುತ್ತಿದ್ದ ಪುಟ್ಟ ರಸ್ತೆಗಳುನಾನುವನ್ನುನಿನ್ನ ನೀನು ಮರೆತರೇನು ಸುಖವಿದೆ, ತನ್ನ ತನವ ಮರೆತರೇನು ಸೊಗಸಿದೆ” ಎಂದು ಅಣಕಿಸಿದವುತರಂಗ,ತುಷಾರ,ಮಯೂರರಿಗೆ ವಯಸ್ಸಾಗಿ ಅವರೆಡೆಗೆ ಯಾರು ಕಣ್ಣು ಹಾಯಿಸುತಿರಲಿಲ್ಲ ಪಧೀವಿಧರರು,ಬುದ್ಧಿಜೀವಿಗಳು ಅವರನ್ನು ಕಂಡೊಡನೆ ಬೇರೆ ರಸ್ತೆಯಲ್ಲಿ ಕದ್ದು ಹೋಗುತಿದ್ದರು.

ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ಸು ಹೋಗುವ ಸಮಯದಲ್ಲಿಭಾವ ಭಾವನೆಗಳಮನೆಯಂಗಳದಲ್ಲಿಎನ್ನಡ್ಡ  ಎಕ್ಕಡ್ಡ”  ಕಾಲು ಚಾಚಿ ಕುಳಿತಿದ್ದರುಏನಪ್ಪಾ ಇಲ್ಲಿ ನಮ್ಮ ಭಾವ ಭಾವನೆಗಳು ಇದ್ರಲ್ಲ ಎಲ್ಲಿ ಹೋದರು ಎಂದು ಕೇಳಿದಾಗಅಯ್ಯೋ ಅವರು ಸತ್ತು ಎಷ್ಟು ವರ್ಷ ಆಯಿತು ಈಗ ಕೇಳ್ತಿದೀರಲ್ಲ, ಅವರ ಕಡೆಯವರು ಮನೆಯನ್ನು
ನಮಗೆ ಮಾರಿದ್ದಾರೆ ನೇನೆ ಓನರ್ರು ಏಮ್ ಕಾವಾಲೀ ??” ಎಂದು ಕೇಳಿದಾಗನಾನುವಿನ ಕಣ್ಣಂಚಲ್ಲಿ ನೀರು.

ಇದೆಲ್ಲವ ಕೇಳಿಸಿಕೊಂಡು ಇನ್ನೇನು ಸಹನೆ ಮಾತಾಡಬೇಕೆಂದಾಗ ದೂರದಿಂದ ಕೇಳಿಸಿತ್ತು ”Shut up!”

ಬರಗೆಟ್ಟ ಪುಂಗಿ ಸೌಂಡು ಕೊಡ


ಸ್ವಲ್ಪ ಆಸೆ, ತುಂಬಾ ಸಿಟ್ಟು ಅತಿಯಾದ ಅಭಿಮಾನ ಎಲ್ಲವನ್ನು ಒಮ್ಮೆಲೇ ಅನುಭವಿಸಿ ಮತ್ತೆ ಬರೆಯಲು ಶುರು ಮಾಡಿದ್ದೇನೆ. ಅತಿಯಾದ ಅಭಿಮಾನ ಕನ್ನಡ ಚಿತ್ರಗಳ ಬಗ್ಗೆ. ಸ್ವಲ್ಪ ಆಸೆ ಕನ್ನಡಿಗನಾಗಿರುವುದಕ್ಕೆ. ತುಂಬಾ ಸಿಟ್ಟು ಇಷ್ಟು ದಿವಸ ನನ್ನಂಥ ಸಾವಿರಾರು ಓದುಗರ, ನೋಡುಗರ ಆಸೆಗೆ ತಣ್ಣೀರು ಎರಚೀ ಇಷ್ಟು ದಿವಸ ನಿಮಗೆ ತಿನ್ನಿಸಿದ್ದು ಯುವ ತೋಪು,ಕೊಟ್ಟದೆಲ್ಲ ಹಳಸಲು ತಿಂದದೆಲ್ಲ ಬೇರೆಯವರು ಬಡಿಸಿದ ಕೊಳಕಲು ಎಂದು ಸುಧೀರ್ಘವಾದ ಕಾರ್ಯಕ್ರಮವೊಂದನ್ನು ನಡೆಸಿ, ತಮ್ಮ ತಮ್ಮ ವಾಹಿನಿಗಳ TRPಗಳನು ಹೆಚ್ಚಿಸಿ ಇನ್ಮುಂದೆ ಕನ್ನಡ ಚಿತ್ರಗಳನ್ನು ನೋಡುವವರು ನಿನ್ನಂತಹ ಮುಟ್ಟಾಳರು ಎಂದು ಘಂಟಾ ಘೋಶಾವಾಗಿ ತೀರ್ಪು ಕೊಟ್ಟು, ಅಭಿಮಾನ ಇರುವ ಕೆಚ್ಚೆದೆ ಕನ್ನಡಿಗನನ್ನು ಟಾಕೀಸ್ ನತ್ತ ತಲೆ ಹಾಕದಿರುವ ಹಾಗೆ ಮಾಡಿದ್ದ ವಾಹಿನಿಗಳಿಗೆ, ಬರಹಗಾರರಿಗೆ, ಕದ್ದು ಸಿನಿಮಾ ಮಾಡಿ ಬೆನ್ನು ತಟ್ಟಿಕೊಂಡ “ತೆರೆಯ ಹಿಂದಿನ ದೊರೆಗೆ” ನನ್ನ ಉಧಂಡ ನಮಸ್ಕಾರಗಳು.

ಇದು ಕಲಿಗಾಲ ಅಲ್ಲಾ Marketing ಕಾಲ. ನಡೆಯದಿರುವುದನ್ನು ನಡೆಸಲು, ಹಳಸಲು ತಿನ್ನಿಸಲು, ತಮ್ಮ ತಮ್ಮ ಸ್ವಾರ್ಥಕ್ಕೆ,ಸೇಡಿಗೆ, ಅಹಂಗೆ, ಅಹಂಕಾರಕ್ಕೆ ಆಯಾ ಕಾಲಕ್ಕೆ ತಮಲ್ಲಿರುವ ಅಥವಾ ತಾವಂದು ಕೊಂಡಂತೆ ತಮ್ಮ ಹಿಡಿತದಲ್ಲಿರುವ ಅಸ್ತ್ರಗಳನ್ನು ಪ್ರಯೋಗಿಸಿ ವಿಜಯೀಭವವೆಂದು ಮೆರೆಯುವ ನಂದನವನ ಸಂವತ್ಸರ. “ಹೀಗೂ ಉಂಟೇ” ಎಂದು ಶ್ರೀ ನಾರಾಯಣ ಸ್ವಾಮಿ ಹೇಳುವ ಮೊದಲೇ ನನ್ನನ್ನು ಕಾಡಿದ ಕೆಲವು ಪ್ರಶ್ನೆಗಳು! ಈ ಸಿನಿಮಾ ಯಾಕ್ ಮಾಡಬೇಕು ಅಥವಾ ಮಾಡಿದ್ದಾರೆ?? ಈ ಲೇಖನ ಯಾಕೇ ಪ್ರಕಟವಾಯಿತು?? ಉದ್ದೇಶ ಏನು ಇದರಿಂದ ನಾನು ತಿಳಿದು ಕೊಳ್ಳುವಂಥದ್ದೇನು?? ಹಾಗೇ ನನ್ನನ್ನು ಕಾಡಿದ ಕಟ್ಟ ಕಡೆಯ ಪ್ರಶ್ನೆ ಸಮಾಜ ನಮಗೆ ಕೊಟ್ಟಿರುವ ಸ್ಥಾನ,ಅಭಿಮಾನ ಎರಡನ್ನು ನಾವು ಹಿಂದಿರುಗಿಸುವ ಅವಶ್ಯಕತೆ, ಅನಿವಾರ್ಯತೆ ಇದೆಯೇ ??

ತಮ್ಮ ಸಾಮಾಜಿಕ ಜವಾಬ್ದಾರಿ ಮರೆತು, ಬಿಸಿಲಿನ ಬೇಗೆಯಲ್ಲಿ ಬೆಂದು “ಬರ”ಗೆಟ್ಟ ಬಾಂಧವರನ್ನು ಬದಿಗಿಟ್ಟು “ಭೀಮನ್ನನ್ನು” ಬಿಂಬಿಸಿದ ನಿಮಗೆ ನನ್ನ ಚೀಮಾರಿ. ಸೇಡಿಗೆ,ಸ್ವಾರ್ಥಕ್ಕೆ “ಸುವ್ರಣಾವಕಾಶ”ವನ್ನು ಸಮರ್ಥವಾಗಿ ಬಳಸಿಕೊಂಡ ಸಹಸ್ರ ಸಿಂಹಗಳಿಗೂ ಮತ್ತೊಂದು ನಮಸ್ಕಾರ. ಖಾಲಿ ಆಗದನ್ನು ಖಾಲಿ ಮಾಡಲು ಗಾಂಧಿಯ ಗಲ್ಲಿ ಗಲ್ಲಿಗಳಲ್ಲೂ ಕಾಫೀಗೆ ಆಹ್ವಾನಿಸಿದ ಹಿರಿಯರಿಗೆ ವಂದನೆಗಳು.
ಕೊನೆಯದಾಗಿ “ತೆರೆ ಹಿಂದಿನ ದೊರೆ” ನಿಮಲ್ಲಿ ನಾ ಮಾಡುವ ಸವಿನಯ ಪ್ರಾರ್ಥನೆ! ಶೋಕಿಗಾಗಿ ಸಿನಿಮಾ ಮಾಡಬೇಡಿ. ಹತಾಶ ಪ್ರೇಕ್ಷಕ ಮತ್ತೆ ಸಿನಿಮಾ ಮಂದಿರಕ್ಕೆ ಬರುವಂತಾಗಲೀ.

ಕೊನೆಯದಾಗಿ ನನ್ನ ಗುರುಗಳು ಹೇಳಿದ್ದ ಮಾತುಗಳನ್ನು ಇಲ್ಲಿ ಮತ್ತೆ ಉಲ್ಲೇಖಿಸುತ್ತಾ….
“ಸಾಧನೆಗೆ ಸಿನಿಮಾ ಸಾಲಕ್ಕೆ ನಟನೆ”
ನಿಮ್ಮವನು
ದಿನು

ವಿದಾಯ


ಅರಿಯದ ದುರಂತಕ್ಕೆ ಹೊಣೆಯಾರು
ಮುಳುಗುವ ದೋಣಿಗೆ ನೀರಿನ ಶಾಪವೇ??
ನನ್ನಲ್ಲಿ ನಿನಗೆಂದು ಪ್ರಶ್ನೆಗಳಷ್ಟೆ ಉಳಿದಿವೆ
ಮನಸ್ಸಿನ ಪ್ರತಿಭಟನೆಯಿದು ನಿನ್ನನ್ನು ನಾನೇಕೆ ಆರಾಧಿಸಲಿ
ಸಾಕಿನ್ನು ಅಭಿಮಾನವಿಲ್ಲದೆ ನಿನ್ನನ್ನು ಧ್ಯಾನಿಸಲಾರೆ
ಮುಗಿಯಿತು ನಮ್ಮ ನಂಟು ನಿನಗೆ ದೈವ ಎನ್ನಲಾ??
ಕದಲೋಡೆಯುವ ಕಣ್ಣಿಗೆ ಇನ್ನೆಲ್ಲ್ಲಿಯ ಸಾಂತ್ವಾನ
ಒಲವೆ ನೀನಿನ್ನು ಬರಿ ನನ್ನ ಸವಿ ನೆನಪು
ಮರಳಿ ಬರಲಾರೆ ಇನ್ನೆಂದು
ಇದೇ ಚಂದ್ರನಿಗೊಂದು ಸೂರ್ಯನ ಪುಟ್ಟ ವಿದಾಯ

ಪ್ರೀತಿ ಎಂದರೆ??


ಆಕೆಯ ಕಂಡೊಡನೆ ಅವನಿಗೇನೋ ಖುಷಿ! ತಿಳಿದೋ ತಿಳಿಯದೆಯೋ, ಅವಳನ್ನೊಮ್ಮೆ ನೋಡಿ ಪ್ರೀತಿ ಎಂಬ ಮಾಯೆ ಆವರಿಸಿ ಮಳೆಯಲ್ಲಿ ನಕ್ಕು ನಲಿದಷ್ಟು ಖುಷಿ. ಕಣ್ಣಿಗೆ ಕಾಣದೆ ಒಮ್ಮೆಯೂ ಭೇಟಿಯಾಗದೆ ಪ್ರೀತಿಸಿದ್ದು ಉಂಟೆ ?? ಅವರಿವರಿಂದ ಕೇಳಿ ತಿಳಿದು ಕದ್ದು ನೋಡಿ ಅವಳು ನನ್ನವಳಾದರೆ ಪ್ರಪಂಚವೇ ಗೆದ್ದಂತೆ ಎಂಬ ಖುಷಿ. ನಿತ್ಯ ಬದುಕಿನ ಮಿಥ್ಯಗಳ ನಡುವೆ ಅವಳೊಂದು ಅವನಿಗೆ ಮುದ ನೀಡುವ ಪುಟ್ಟ ಸವಿ ನೆನಪು. ಭೇಟಿ ಮಾಡಿ ಮಾತಾಡಿದರೆ ತನನೆಲ್ಲಿ ತಿರಸ್ಕರಿಸುವಳೋ ಎಂಬ ದುಗುಡ! ಜೀವನವೆಂದರೆ ಕೆಲವರಿಗೆ ಕೊಂಡು ಕೊಳ್ಳುವಿಕೆ. ಮಿಕ್ಕವರಿಗೆ ನಾ ಕೊಟ್ಟೆ ಅವಳು ಕೊಡಲಿಲ್ಲ ಅದಕ್ಕೆ ಪ್ರೀತಿಯೆಂದರೆ ಅಪನಂಬಿಕೆ! ಇನ್ನು ಹಲವರಿಗೆ ಕಾಮವೆಂಬ ಎರಡು ಕ್ಷಣದ ಪರಮ ಪಾಪಿಷ್ಟ ಪಾರುಪತ್ಯದ ಪರಿಕಲ್ಪನೆ! ಇವರಿಬ್ಬರು ಅದ ಮೀರಿ ನಿಂತವರು! ಅಷ್ಟಕ್ಕೂ ಪ್ರೀತಿ ಎಂದರೆ??

ವಿಸ್ತಾರವಾದ ಬೆಂಗಳೂರಿನ ಒಂದು ಪುಟ್ಟ coffee ಶಾಪ್ ನಲ್ಲಿ ಒಮ್ಮೆ ಭೇಟಿ! ಧೈರ್ಯ ಮಾಡಿ ಅವಳ ಕೇಳಿಯೇ ಬಿಟ್ಟ ಒಮ್ಮೆ ನಾ ನಿನ್ನ ಕೈ ಹಿಡಿಯಲೇ?? ಕೈ ಮುಟ್ಟಿದೊಡನೆ ಮತ್ತೆ ಮತ್ತೆ ಮಳೆಯಲೀ ನೆಂದು ನಲಿದಷ್ಟು ಖುಷಿ! ಅದೇಕೋ ಅಂದು ಅವನ ಕಣ್ಣುಗಳು ಮಂಜಾದವು! ಮುಂದೊಂದು ದಿನ ಮುನ್ಸೂಚನೆ ಕೊಡದೆ ನಾ ನಿನ್ನವಳಲಾಗಲಾರೆ ಎಂಬ ಸಂದೇಶವನಿತ್ತು ಹೊರಟು ಹೋದಳಾಕೆ! ಕೊನೆಗೂ ಪ್ರೀತಿ ಎಂದರೆ ಎಂಬ ಯಕ್ಷ ಪ್ರಶ್ನೆಗೆ ಅವನಿಗೆ ಉತ್ತರ ಸಿಗಲಿಲ್ಲ.

ಮಳೆ ಬಂದಾಗಲೆಲ್ಲ ನೆಂದು ಅವಳ ನೆನಪಿನಲ್ಲಿ ಮತ್ತೆ ಪ್ರೀತಿಯ ಕಂಡ!

ಇಷ್ಟಕ್ಕೂ ಪ್ರೀತಿ ಎಂದರೆ??

ನನ್ನಂತೆ – 16


ಬರಬೇಡ ಗೆಳತೀ ನನ್ನ ಮನಸ್ಸೆಂಬ ಮನೆಯಂಗಳಕೆ
ಭರವಸೆಯೆಂಬ ಸೀರೆಯುಟ್ಟು.
ಇಲ್ಲಿ ಸುಟ್ಟ ಗಾಯಗಳಿವೆ,
ಕಹಿ ನೆನಪೆಂಬ ಆಳವಾದ ಬೇರುಗಳಿವೆ.
ಬೆಳಕು ತುಂಬಲಾರದಷ್ಟು ಕಗ್ಗತ್ತಲಿದೆ.
ಕುಸಿದು ಖುಷಿಯ ಕರಗಿಸುವ
ಕತ್ತಲಿನ ಕೊಣೆಯಿದು.
ಬರಬೇಡ ಗೆಳತೀ ಈ ಮನಸ್ಸೆಂಬ ಮಸಣದ ಮನೆಯೊಳಗೇ